Articles Category

Central Government Schemes For Farmers : ರೈತರಿಗೆ ವರದಾನವಾಗಿರುವ ಕೇಂದ್ರ ಸರ್ಕಾರದ ಈ ಯೋಜನೆಗಳು

ರೈತರಿಗೆ ವರದಾನವಾಗಿರುವ ಕೇಂದ್ರ ಸರ್ಕಾರದ ಈ ಯೋಜನೆಗಳು: Central Government Schemes For Farmers

1)ಕಿಸಾನ್ ಕ್ರೆಡಿಟ್ ಕಾರ್ಡ್: ಈ ಯೋಜನೆಯ ಮೂಲಕ ರೈತ ಬಾಂಧವರು ಸಕಾಲದಲ್ಲಿ ಸಾಲ ಪಡೆಯಬಹುದು. ಅಲ್ಪಾವಧಿಯ ಸಾಲವನ್ನು ಸಕಾಲದಲ್ಲಿ ಒದಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆರಂಭಿಸಿತ್ತು. ಸದ್ಯ, ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಈಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜೊತೆಗೆ ಲಿಂಕ್ ಆಗಿದೆ. ರೈತರು ಶೇಖಡಾ 4 ಬಡ್ಡಿ ದರದಲ್ಲಿ KCC ಯಿಂದ 3 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಅದೇ ಸಮಯದಲ್ಲಿ, ಪಿಎಂ ಕಿಸಾನ್ ನ ಫಲಾನುಭವಿಯು ಕೆಸಿಸಿಗೆ ಅರ್ಜಿ ಸಲ್ಲಿಸುವುದು ಅತ್ಯಂತ ಸರಳವಾಗಿದೆ.

2) ನೈಸರ್ಗಿಕ ವಿಕೋಪದ : ಮಳೆ, ಚಂಡಮಾರುತ, ಆಲಿಕಲ್ಲು, ಭೂಕಂಪದಂತಹ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಬೆಳೆಗಳಿಗೆ ಉಂಟಾದ ಹಾನಿಯಿಂದ ರೈತರಿಗೆ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಲಾಗಿದೆ. ಈಗಾಗಲೇ ಈ ಯೋಜನೆಯ ಬಗ್ಗೆ ನಮ್ಮ ವೆಬ್ಸೈಟ್ ನಲ್ಲಿ ಮಾಹಿತಿ ಪಡೆದುಕೊಂಡಿದ್ದೀರಿ. ಸದ್ಯ,  ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮಾ ಮೊತ್ತವನ್ನು 40,700 ರೂ. ಗೆ ಏರಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ, ಆರಂಭದಲ್ಲಿ ಪ್ರತಿ ಹೆಕ್ಟೇರ್‌ಗೆ 15,100 ರೂ ಪರಿಹಾರವನ್ನು ನಿಗದಿಪಡಿಸಲಾಗಿತ್ತು. ಈ ಯೋಜನೆಯ ಲಾಭವು, ಬಿತ್ತನೆ ಪೂರ್ವದಿಂದ ಕಟಾವಿನ ನಂತರದ ಸಂಪೂರ್ಣ ಬೆಳೆಯ ಪ್ರಕ್ರಿಯೆಯನ್ನು ಒಳಗೊಂಡಿದೆ.

3)ಪ್ರಧಾನಮಂತ್ರಿ ಆವಾಸ್ ಯೋಜನೆ: 2022 ರ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಂದು ನಿರಾಶ್ರಿತ ಕುಟುಂಬಗಳಿಗೆ ಮನೆಗಳನ್ನು ಒದಗಿಸುವುದು ಇದರ ಉದ್ದೇಶ. ವಸತಿಯಿಲ್ಲದ ಅಥವಾ ಗ್ರಾಮೀಣ ಪ್ರದೇಶದಲ್ಲಿ ಕಚ್ಚಾ, ಪಾಳುಬಿದ್ದ ಮನೆಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ, ನೀವು ವಾರ್ಷಿಕ ಶೇಖಡಾ 6.5 ವರೆಗಿನ ಬಡ್ಡಿ ದರದಲ್ಲಿ ಸುಮಾರು 6 ಲಕ್ಷದಷ್ಟು ಸಾಲವನ್ನು ತೆಗೆದುಕೊಳ್ಳಬಹುದು. ಈ ಯೋಜನೆಯ ಪ್ರಕಾರ, ಮನೆಯ ಕನಿಷ್ಠ ಗಾತ್ರ 25 ಚದರ ಮೀಟರ್ ಆಗಿರಬೇಕು. ವಿದ್ಯುತ್, ಅಡುಗೆಮನೆಯಂತಹ ಮೂಲ ಸೌಕರ್ಯಗಳನ್ನು ಹೊಂದಿರುವುದು ಕಡ್ಡಾಯ.

4) ಪ್ರಧಾನಮಂತ್ರಿ ಜನ್ ಧನ್ ಯೋಜನೆ : ಇನ್ನೊಂದು ಪ್ರಮುಖ ಯೋಜನೆ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಪ್ರಕಾರ, ಬಡ ರೈತರ ಖಾತೆಯನ್ನು ಶೂನ್ಯ ಬ್ಯಾಲೆನ್ಸ್‌ನಲ್ಲಿ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತೆರೆಯುವ ಉದ್ದೇಶವಿದೆ. ಸದ್ಯ, ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಹಣಕಾಸು ಯೋಜನೆಗಳಲ್ಲಿ ಇದೂ ಒಂದು. ಈ ಯೋಜನೆಯಡಿಯಲ್ಲಿ, ಬಡ ವ್ಯಕ್ತಿಯು ಅತ್ಯಂತ ಸರಳವಾಗಿ ತನ್ನ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ ತೆರೆಯಲಾದ ಖಾತೆಯಲ್ಲಿ, ಖಾತೆದಾರರು ಸುಮಾರು 1.30 ಲಕ್ಷ ರೂ. ನಷ್ಟು ಲಾಭ ಪಡೆಯುತ್ತಾರೆ. ಜೊತೆಗೆ, ಇದರಲ್ಲಿ ಅಪಘಾತ ವಿಮೆ ಕೂಡ ಲಭ್ಯವಿದೆ. ಈ ಯೋಜನೆಯಡಿಯಲ್ಲಿ, ಖಾತೆದಾರರು ಸುಮಾರು 1,00,000 ರೂ. ನಷ್ಟು ಅಪಘಾತ ವಿಮೆ, ಮತ್ತು 30,000 ರೂ. ನಷ್ಟು ಸಾಮಾನ್ಯ ವಿಮೆ ಪಡೆಯುವ ಅವಕಾಶವಿದೆ.

ಇದನ್ನು ಓದಿ… Pradhan Mantri Kisan Manadhan Yojana 2023 : ಪ್ರಧಾನ ಮಂತ್ರಿ ಕಿಸಾನ್ ಮಾನಧನ್ ಯೋಜನೆ: ರೈತರಿಗಾಗಿ 3 ಸಾವಿರ ರೂ. ಪಿಂಚಣಿ ದೊರೆಯಲಿದೆ:

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

    

Leave a Reply

Your email address will not be published. Required fields are marked *