ರೈತರಿಗೆ ಸಿಹಿಸುದ್ದಿ : ಬ್ಯಾಂಕ್ ಗಳು ರೈತರ ಆಸ್ತಿ ಜಪ್ತಿ ಮಾಡುವಂತಿಲ್ಲ, ಮರುಪಾವತಿಗೆ ಸಮಯಾವಕಾಶ ನೀಡಬೇಕು..
ಇತ್ತೀಚಿಗೆ ದೊಡ್ಡ ಪ್ರಮಾಣದ ಪ್ರವಾಹದಿಂದ ಬೆಳೆನಷ್ಟ ಅನುಭವಿಸುತ್ತಿರುವ ರೈತರಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾಧಾನಕರ ಸಂಗತಿಯೊಂದರ ಬಗ್ಗೆ ಘೋಷಣೆ ಮಾಡಿದ್ದಾರೆ. ಹೌದು, ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸಲು ತಡಮಾಡಿದಲ್ಲಿ, ಅವರ ಆಸ್ತಿಯನ್ನು ಜಪ್ತಿ ಮಾಡದಂತೆ ನಿರ್ಬಂಧ ವಿಧಿಸಲು ಸಂಬಂಧಪಟ್ಟ ಕಾನೂನು ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಕೃಷಿ ಮೇಳದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರೈತರ ಆಸ್ತಿ ಜಪ್ತಿ ಬದಲು ಸಾಲ ಮರುಪಾವತಿಗೆ ಸಮಯ ನೀಡುವ ಬಗ್ಗೆ ಕಾನೂನು ಜಾರಿಗೆ ತರುವ ಬಗ್ಗೆ, ತಜ್ಞರು ಸೇರಿ ಇನ್ನಿತರ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು. ದಿನೇ ದಿನೆ ಕೃಷಿಕರ ಪ್ರಮಾಣ ಕಡಿಮೆಯಾಗುತ್ತಿದೆ, ರೈತರ ಆದಾಯದಲ್ಲೂ ಕುಸಿತ ಕಾಣುತ್ತಿದೆ. ಇದಕ್ಕಾಗಿಯೇ, ಕೇಂದ್ರ ಸರಕಾರ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದು, ರಾಜ್ಯ ಸರಕಾರವೂ ಇದಕ್ಕೆ ನೆರವು ನೀಡುತ್ತಿದೆ. ಸಾಂಕ್ರಾಮಿಕ ಕೊರೊನಾ ಪಿಡುಗು, ಬೆಳೆ ನಷ್ಟ ಸೇರಿ ಇನ್ನಿತರ ಕಾರಣಗಳಿಂದಾಗಿ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸಲು ಒದ್ದಾಡುತ್ತಿದ್ದಾರೆ. ಈ ಕಾರಣದಿಂದ, ಬ್ಯಾಂಕ್‌ಗಳು ರೈತರ ಆಸ್ತಿ ಜಪ್ತಿ ಮಾಡುವ ಕ್ರಮ ಕೈಗೊಳ್ಳುತ್ತಿವೆ. ಹಾಗಾಗಿ, ಕೃಷಿ ಕಾರಣಗಳಿಂದ ಬ್ಯಾಂಕ್‌ಗಳ ಸಾಲ ತೀರಿಸುವುದು ತಡವಾದರೆ, ಆಸ್ತಿಯನ್ನು ಜಪ್ತಿ ಮಾಡುವಂತಿಲ್ಲ ಎಂದು ಹೇಳಿದರು.
ಈಗಾಗಲೇ, ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್‌ಗಳಿಂದ ದೊರೆಯುತ್ತಿರುವ ಸಾಲದ ಪ್ರಮಾಣ ಬಹಳ ಕಡಿಮೆಯಾಗಿದ್ದು, ಎರಡರಿಂದ ಮೂರು ಹೆಕ್ಟೇರ್ ಭೂಮಿ ಹೊಂದಿರುವ ರೈತರಿಗೆ ನಲವತ್ತರಿಂದ ಅರವತ್ತು ಸಾವಿರ ರೂ. ಸಾಲ ನೀಡಲಾಗುತ್ತಿದೆ. ಇಷ್ಟು ಹಣ ಕೃಷಿ ಚಟುವಟಿಕೆಗಳಿಗೆ ಸಾಲುತ್ತಿಲ್ಲ. ಹೀಗಾಗಿ ಬ್ಯಾಂಕ್‌ಗಳು ಸಾಲ ಹಾಗೂ ಆರ್ಥಿಕ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್, “ರೈತರು ಟ್ರ್ಯಾಕ್ಟರ್ ಹಾಗೂ ಇನ್ನಿತರ ವಾಹನಗಳನ್ನು ಬಳಸುವ ಮೂಲಕ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಅನುಕೂಲವಾಗಲು ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ, 1 ಎಕರೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಡೀಸೆಲ್ ಖರೀದಿಗಾಗಿ 250 ರೂ. ಸಬ್ಸಿಡಿ ನೀಡಲಾಗುವುದು. ಒಟ್ಟು 5 ಎಕರೆವರೆಗೆ ಸಬ್ಸಿಡಿ ನೀಡಲಾಗುತ್ತಿದ್ದು, ರೈತರು ಒಟ್ಟು 1,250 ರೂ. ಸಬ್ಸಿಡಿ ಹಣ ಪಡೆಯಬಹುದು” ಎಂದು ತಿಳಿಸಿದರು.
ಇದನ್ನು ಓದಿ… Central Government Schemes For Farmers : ರೈತರಿಗೆ ವರದಾನವಾಗಿರುವ ಕೇಂದ್ರ ಸರ್ಕಾರದ ಈ ಯೋಜನೆಗಳು
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ