ಕೃಷಿ ಅಭಿವೃದ್ಧಿ ಹಾಗೂ ರೈತರಿಗಾಗಿ ಸರ್ಕಾರದ ಯೋಜನೆಗಳು: Government Schemes for Agricultural Development and Farmers
Government Schemes for Agricultural Development and Farmers: ಕರ್ನಾಟಕ ಕೃಷಿ ಇಲಾಖೆಯು ರೈತರಿಗಾಗಿ ಅನೇಕ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸುವ ಮೂಲಕ ರೈತರಿಗೆ ಜೀವಾಳವಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಯೋಜನೆಗಳು ಮತ್ತು ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. ಈ ಮಾಹಿತಿಯಿಂದ ಅನೇಕ ರೈತರು ಪ್ರಯೋಜನ ಪಡೆದುಕೊಳ್ಳಬಹುದು.
1.ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆ: Pradhana Mantri Agriculture Irrigation Scheme and Kisan Samman Scheme
ರೈತರಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರವು ಈ ಯೋಜನೆಯಲ್ಲಿ, ಐವತ್ತು ಸಾವಿರ ಕೋಟಿ ರೂ. ಸ್ಪ್ರಿಂಕ್ಲರ್ ವಿಧಾನದ ನೀರಾವರಿಗೆ ತಗುಲುವ ವೆಚ್ಚದ 80 ರಿಂದ 90 ರಷ್ಟು ಸಹಾಯಧನವನ್ನು ನೀಡುತ್ತದೆ. ಈ ವಿಧಾನದಿಂದ, ಹೊಲವನ್ನು ಸಮತಟ್ಟು ಮಾಡದೆಯೇ ನೀರಾವರಿ ಮಾಡಬಹುದು. ಈ ವಿಧಾನವು ಇಳಿಜಾರುಗಳಲ್ಲಿ ಅಥವಾ ಕಡಿಮೆ ಎತ್ತರದಲ್ಲಿ ಬಹಳ ಪರಿಣಾಮಕಾರಿಯಾಗುತ್ತಿದೆ. ಈ ಯೋಜನೆಯಡಿಯಲ್ಲಿ, 57 ತಾಲ್ಲೂಕುಗಳ 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿ ಚಟುವಟಿಕೆಗಳಿಗೆ 62.2.26 ಕೋಟಿ ರೂ. ಮಂಜೂರು ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಈಗಾಗಲೇ 19.14 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಗಳನ್ನು ಉಪಚಾರ ಮಾಡಲಾಗಿದೆ.
ಇನ್ನು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2021-22 ಸಾಲಿನಲ್ಲಿ, ರಾಜ್ಯದ. ಸುಮಾರು 50.35 ಲಕ್ಷ ರೈತರಿಗೆ, 1,0007,13 ಕೋಟಿಗಳಷ್ಟು ಪರಿಹಾರ ಜಮಾ ಆಗಿದೆ. ಇನ್ನು ಈ ವರ್ಷ 47.83 ಲಕ್ಷ ರೈತರಿಗೆ 956,71 ಕೋಟಿ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.
2.ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ: Directorate of Secondary Agriculture
ರೈತರ ಆದಾಯವನ್ನು ಹೆಚ್ಚಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದೆ. ಈ ಯೋಜನೆಯಲ್ಲಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ ಮತ್ತು ಗುಡಿ ಕೈಗಾರಿಕೆಗಳನ್ನು ಹೊಂದಿರುವ ರೈತರಿಗೆ ಆದಾಯ ತರಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ, 2022-23ನೇ ಸಾಲಿನ ಆಯವ್ಯಯದಲ್ಲಿ 500 ಕೋಟಿ ಅನುದಾನವನ್ನು ಒದಗಿಸಲಾಗಿದ್ದು ಮೊದಲನೆಯ ಕಂತಿನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
3.ರೈತ ಶಕ್ತಿ ಯೋಜನೆ: Raitha Shakti Yojana:
ಕೃಷಿ ಯಾಂತ್ರೀಕರಣವನ್ನು ಪ್ರೋತ್ಸಾಹಿಸಲು ಡಿಸೇಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಎಕರೆಗೆ ಸುಮಾರು 250 ರೂ.ಗಳಂತೆ ಐದು ಎಕರೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಗೆ ಈಗಾಗಲೇ 4 ಕೋಟಿ ರೂ. ಅನುದಾನ ನೀಡಲಾಗಿದೆ.
4.ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಷಿ ಮಹಾವಿದ್ಯಾಲಯ: College of Agriculture in Hagari, Bellary District
ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರವು ಈಗಾಗಲೇ ಆದೇಶ ಹೊರಡಿಸಿದೆ.
5.ಪ್ರಧಾನಮಂತ್ರಿ ಕಿರು-ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ: Regulation of Prime Minister Micro-Food Processing Industries
PMFME ಯೋಜನೆಯಡಿ ರಾಜ್ಯ ಸರ್ಕಾರವು ಶೇ.15ರಷ್ಟು ಹೆಚ್ಚುವರಿ ಸಹಾಯಧನ, ಎಂದರೆ ಸುಮಾರು 17.46 ಕೋಟಿಯನ್ನು ಕೇಂದ್ರದಿಂದ, ಹಾಗೂ 4.21 ಕೋಟಿಯನ್ನು ರಾಜ್ಯದಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣ ಕ್ಷೇತ್ರದಲ್ಲಿ ಒಟ್ಟು 93.25 ಕೋಟಿ ಹೂಡಿಕೆ ಮಾಡಲಾಗಿದೆ.
6.ರೈತ ಮಕ್ಕಳಿಗೆ ಮುಖ್ಯಮಂತ್ರಿಯವರ “ರೈತ ವಿಧ್ಯಾನಿಧಿ” ಯೋಜನೆ: Chief Minister’s “Raitha Vidhyanidhi” scheme for farmer children
ರೈತ ಕುಟುಂಬದ ಮಕ್ಕಳಿಗೆ ವಿಧ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಮುಖ್ಯಮಂತ್ರಿ ವಿಧ್ಯಾನಿಧಿ ಕಾರ್ಯಕ್ರಮ ಯೋಜನೆಯಡಿಯಲ್ಲಿ ಈಗಾಗಲೇ 9.48 ಲಕ್ಷ ವಿದ್ಯಾರ್ಥಿಗಳಿಗೆ 397.213 ಕೋಟಿ ರೂ. ವಿಧ್ಯಾರ್ಥಿ ವೇತನ ವಿತರಣೆ ಮಾಡಲಾಗಿದೆ. ಈ ಯೋಜನೆಯಿಂದ ವಿಧ್ಯಾರ್ಥಿಗಳು ವಂಚಿತರಾಗಿದ್ದರೆ ಹತ್ತಿರದ ಕೃಷಿ ಕೇಂದ್ರವನ್ನು ಸಂಪರ್ಕಿಸಬಹುದು. ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ. ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ ಡಿಬಿಟಿ ಮುಖಾಂತರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಹಾಗೆಯೇ, ರೈತರ ಮಕ್ಕಳು ಓದುತ್ತಿರುವ ಕೋರ್ಸ್ ಗೆ ಅನುಗುಣವಾಗಿ 2000 ರೂ.ನಿಂದ 11,000 ರೂಪಾಯಿವರೆಗೆ ವಿಧ್ಯಾರ್ಥಿ ವೇತನ ಸೌಲಭ್ಯವನ್ನು ಪಡೆಯಬಹುದು.
ಇದನ್ನು ಓದಿ…. ಭಾರತದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ! What Are The Problems Faced By Farmers In India?
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ
ಇದನ್ನು ಓದಿ….ಇದನ್ನು ಓದಿ… ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರದ ಯೋಜನೆಗಳು ! Government Schemes To Promote Organic Farming