Articles Category

ಸಹಜ ಕೃಷಿಯಲ್ಲಿ ಇಳುವರಿ ಹೆಚ್ಚಿಸುವುದು ಹೇಗೆ ! How To Increase Yield In Organic Farming

How To Increase Yield In Organic Farming

ಸಹಜ ಕೃಷಿಯಲ್ಲಿ ಇಳುವರಿ ಹೆಚ್ಚಿಸುವುದು ಹೇಗೆ 

How To Increase Yield In Organic Farming – ಸಹಜ ಕೃಷಿ ಪದ್ದತಿಯನ್ನು ಅನುಸರಿಸುವುದು ಮಾತ್ರವಲ್ಲ, ಅಧಿಕ ಇಳುವರಿಯನ್ನು ಪಡೆಯುವುದೂ ಮುಖ್ಯವಾಗುತ್ತದೆ. ಹಾಗಾಗಿ, ಸಹಜ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಅನುಸರಿಸಬಹುದಾದ ಕೆಲವು ತಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಮೊದಲನೆಯದಾಗಿ, ಕೀಟನಾಶಕವಾಗಿ ಹಾಗೂ ಇಳುವರಿ ಹೆಚ್ಚಳಕ್ಕೆ ಜೀವಾಮೃತ ಬಳಕೆ: 

ಸಾವಯವ ಕೃಷಿ ಪದ್ಧತಿ ಅನುಸರಿಸುವ ರೈತರು, ಮನೆಯಲ್ಲಿಯೇ ಸುಲಭವಾಗಿ ಜೀವಾಮೃತವನ್ನು ತಯಾರಿಸಬಹುದು. ಇದಕ್ಕಾಗಿ ಯಾವುದೇ ಮಾರುಕಟ್ಟೆಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿರುವ ದೇಸಿ ಹಸುವಿನ ಸೆಗಣಿ, ಗೋಮೂತ್ರ, 2 ಕೆಜಿ ಬೆಲ್ಲ, 2 ಕೆಜಿ ಹಿಟ್ಟು ಹಾಗೂ ಬೊಗಸೆ ಮಣ್ಣಿದ್ದರೆ ಸಾಕು, ಅತ್ಯಂತ ಸರಳ ವಿಧಾನದಲ್ಲಿ, ಮನೆಯಲ್ಲಿಯೇ ಜೀವಾಮೃತ ತಯಾರಿಸಬಹುದು. ಹಾಗಾದರೆ ಜೀವಾಮೃತ ತಯಾರಿಸಲು ಬೇಕಾದ ವಸ್ತುಗಳ ಬಗ್ಗೆ ನೋಡೋಣ. ಸಹಜ ಕೃಷಿಯಲ್ಲಿ ಜೀವಾಮೃತ ತಯಾರಿಕೆಗೆ, 200 ಲೀಟರ್ ನೀರು, 10 ಕೆಜಿ ದೇಸಿ ಹಸುವಿನ ಸೆಗಣಿ, 10 ಲೀಟರ್ ಗೋಮೂತ್ರ, 2 ಕೆಜಿ ಬೆಲ್ಲ,  2 ಕೆಜಿ ಧಾನ್ಯದ ಹಿಟ್ಟು, ಒಂದು ಬೊಗಸೆ ಮಣ್ಣು ಬೇಕಾಗುತ್ತದೆ. 

ಜೀವಾಮೃತ ತಯಾರಿಸುವ ವಿಧಾನ ಹೀಗಿದೆ : How to Make Jivamrit

ಜೀವಾಮೃತವನ್ನು ನೆರಳಿರುವ ಸ್ಥಳದಲ್ಲಿ ತಯಾರಿಸುವುದು ಒಳ್ಳೆಯದು. ಮನೆಯ ಮುಂದೆ ಬೆಳೆದಿರುವ ಗಿಡದ ಕೆಳಗಿನ ಜಾಗ ಆಯ್ಕೆ ಮಾಡಿಕೊಂಡರೆ ಇನ್ನೂ ಉತ್ತಮ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.

How To Increase Yield In Organic Farming

ಒಂದು ಬ್ಯಾರೆಲ್ ನಲ್ಲಿ 200 ಲೀಟರ್ ನೀರು ಹಾಕಬೇಕು, ನಂತರ ಅದಕ್ಕೆ 10 ಕೆಜಿ ದೇಸಿ ಹಸುವಿನ ಸೆಗಣಿ ಬೆರೆಸಬೇಕು ಹಾಗೂ 10 ಲೀಟರ್ ಹಸುವಿನ ಮೂತ್ರವನ್ನು ಸಹ ಬೆರೆಸಬೇಕು. 2 ಕೆಜಿ ಬೆಲ್ಲ ಹಾಗೂ ಎರಡು ಕೆಜಿ ಧಾನ್ಯದ ಹಿಟ್ಟು ಮತ್ತು ಜಮೀನಿನ ಬದುಗಳಿಂದ ಅಥವಾ ತೋಟದಿಂದ, ಆಲದಮರ ಅಥವಾ ಬನ್ನಿಗಿಡದ ಬುಡದಿಂದ ಒಂದು ಬೊಗಸೆ ಮಣ್ಣನ್ನು ತಂದು ನೀರಿನಲ್ಲಿ ಬೆರೆಸಬೇಕು. ಹಸುವಿನ ಸೆಗಣಿ, ಹಸುವಿನ ಮೂತ್ರ, ಬೆಲ್ಲ ಹಾಗೂ ಧಾನ್ಯದ ಹಿಟ್ಟು, ಬೊಗಸೆ ಮಣ್ಣನ್ನು ಬ್ಯಾರೆಲ್ ನಲ್ಲಿರುವ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು. ಇದನ್ನು 7 ದಿನಗಳ ಕಾಲ ನೆರಳಿನಲ್ಲಿರಲು ಬಿಟ್ಟು, ಪ್ರತಿ ದಿನ ಬೆಳಗ್ಗೆ ಮತ್ತು ಸಾಯಂಕಾಲ ದ್ರಾವಣವನ್ನು ಚೆನ್ನಾಗಿ ಕಲಕುತ್ತಿರಬೇಕು. ಇ ವಿಧಾನದಲ್ಲಿ ಜೀವಾಮೃತ ತಯಾರಾಗುತ್ತದೆ. 7 ದಿನಗಳ ಪ್ರಕ್ರಿಯೆಯ ನಂತರ ಈ ದ್ರಾವಣವನ್ನು ಬೆಳೆಗಳಿಗೆ ನೀರಾವರಿ ಮೂಲಕ ಸಿಂಪಡಿಸಬಹುದು. ಅಥವಾ ಬೆಳೆಗಳ ಮೇಲೆ ನೇರವಾಗಿ ಸಿಂಪರಣೆ ಮಾಡಬಹುದು. ಸುಮಾರು ಒಂದು ಎಕರೆಗೆ 200 ಲೀಟರ್ ಜೀವಾಮೃತ ಬೇಕಾಗುತ್ತದೆ.ಈಗಾಗಲೇ ಹೇಳಿದಂತೆ, ಜೀವಾಮೃತದ ದ್ರಾವಣವನ್ನು ಸೋಸಿ ನೇರವಾಗಿ ಬೆಳೆಗೆ ಎಲೆಗಳ ಮೂಲಕ ಸಿಂಪರಣೆ ಮಾಡಬಹುದು. ಆದರೆ, ನೀರಾವರಿಯಲ್ಲಿ ನೀರು ಹಾಯಿಸುವ ಸಂದರ್ಭದಲ್ಲಿ ನೀರಿನೊಂದಿಗೆ ಜೀವಾಮೃತ ಕೊಡುವುದು ಬಹಳ ಒಳ್ಳೆಯದು. ಇದರಿಂದ ಗಿಡದ ಬೆಳವಣಿಗೆ ಚೆನ್ನಾಗಿರುತ್ತದೆ, ಅಲ್ಲದೆ, ಬೆಳೆಗೆ ಬರುವ ರೋಗ ಮತ್ತು ಕೀಟದ ಬಾಧೆ ಕಡಿಮೆಯಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. 

ಜೀವಾಮೃತದ ಪ್ರಯೋಜನಗಳು ಏನು ಎಂದು ನೋಡುವುದಾದರೆ: 

  • ಇದು ಸಸ್ಯಗಳ ಬೆಳವಣಿಗೆಗೆ ಸಹಕಾರಿಯಾಗುವ ಮೂಲಕ ಇಳುವರಿ ಹೆಚ್ಚಳಕ್ಕೆ ಸಹಕರಿಯಾಗಿದೆ. ಕೀಟ ಮತ್ತು ರೋಗಗಳ ವಿರುದ್ಧ ಪ್ರತಿರೋಧ ನೀಡುತ್ತದೆ. ಮಣ್ಣಿನಲ್ಲಿ ಸಾವಯವ ಕಾರ್ಬನ್ ಹೆಚ್ಚಿಸುತ್ತದೆ, ಹಾಗೂ ಬೆಳೆಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲು ನೆರವಾಗಲು ಪಿ.ಎಸ್.ಬಿ ಬ್ಯಾಸಿಲಸ್, ಮೈಕ್ರೋರೈಜ್ ಮುಂತಾದ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗುತ್ತವೆ. ಹೀಗೇ, ಸೂಕ್ಷ್ಮ ಜೀವಿಗಳ ಚಟುವಟಿಕೆ ವೃದ್ಧಿಯಾಗಿ ಭೂಮಿ ಫಲವತ್ತಾಗುತ್ತದೆ.
  • ದೇಸಿ ಹಸುವಿನ ಸೆಗಣಿ ಹಾಗೂ ಗಂಜಲ ಕೋಟ್ಯಾಂತರ ಪ್ರಯೋಜನಕಾರಿ ಸೂಕ್ಷ್ಮಾಣು ಜೀವಿಗಳನ್ನು ಹೊಂದಿದೆ. ಏಳು ದಿನಗಳಲ್ಲಿ ಸೂಕ್ಷ್ಮಾಣು ಜೀವಿಗಳು ದ್ವಿಗುಣಗೊಂಡು ಬೆಳೆಗಳ ಬೆಳವಣಿಗೆಯನ್ನು ವೃದ್ಧಿಸುತ್ತದೆ. ಹಾಗಾಗಿ, ಜೀವಾಮೃತವು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ವೃದ್ಧಿಸುತ್ತದೆ.

ಇನ್ನು, ಮಳೆಯನ್ನು ನಂಬಿಕೊಂಡು ಕೃಷಿಯಲ್ಲಿ ತೊಡಗುವ ರೈತರಿಗೆ ಅನೇಕ ತೊಂದರೆಗಳು ಎದುರಾಗುವುದು ಸಹಜ. ಅವುಗಳಲ್ಲಿ ಅತೀವೃಷ್ಟಿ, ಅನಾವೃಷ್ಟಿ, ಕಾಲಕಾಲಕ್ಕೆ ಮಳೆ ಸರಿಯಾಗಿ ಆಗದೇ ನಿರೀಕ್ಷಿತ ಮಟ್ಟದ ಇಳುವರಿಯನ್ನು ಪಡೆಯುವುದು ಕಷ್ಟವಾಗುತ್ತದೆ. ಇಂತಹ ತೊಂದರೆಗಳ ನಿವಾರಣೆಗೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನ್ಯಾನೋ ತಂತ್ರಜ್ಞಾನದ ಮೂಲಕ PUSA HYDROGEL ಎಂಬ ತಂತ್ರಜ್ಞಾನವನ್ನು ಸಂಶೋಧಿಸಿದೆ. ಈ ತಂತ್ರಜ್ಞಾನವು, ತನ್ನಲ್ಲಿ 350-500 ರಷ್ಟುನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ನಂತರ ನೀರನ್ನು ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಬಿಡುಗಡೆಗೊಳಿಸುತ್ತದೆ.

PUSA HYDROGEL ತಂತ್ರಜ್ಞಾನದ ಹೀರಿಕೊಳ್ಳುವಿಕೆಯು, 50 ಡಿಗ್ರಿ ತಾಪಮಾನದವರೆಗೂ ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರತ್ಯೇಕವಾಗಿ ಉಷ್ಣವಲಯ ಮತ್ತು ಉಪ ಉಷ್ಣವಲಯಗಳ ವಾತಾವರಣದ ಸ್ಥಿತಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ. ಇದು, ಒಂದು ಬೆಳೆಯ ಕಾಲಾವಧಿ ಪೂರ್ಣವಾಗುವವರೆಗೂ ಪರಿಣಾಮಕಾರಿಯಾಗಿದೆ. ಜೊತೆಗೆ, ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಗಳನ್ನು ಸುಧಾರಿಸುತ್ತದೆ. ಇದು, ಬೀಜಗಳ ಮೊಳಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗೂ ಬೇರುಗಳ ಬೆಳವಣಿಗೆ ಮತ್ತು ಅವುಗಳ ಸಾಂದ್ರತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಒಂದು ವೇಳೆ, ಮಣ್ಣಿನಲ್ಲಿ ಕಡಿಮೆ ತೇವಾಂಶ ಇದ್ದರೂ ಸಹ ಅದನ್ನು ಸರಿಯಾದ ಪ್ರಮಾಣದಲ್ಲಿ ಬೆಳೆಗಳಿಗೆ ಸಿಗುವ ಹಾಗೆ ಮಾಡುವ ಈ ತಂತ್ರಜ್ಞಾನ ಇಳುವರಿ ಹೆಚ್ಚಳಕ್ಕೆ ಬಹಳ ಸಹಕಾರಿಯಾಗಿದೆ. 

ಅಧ್ಯಯನಗಳ ಪ್ರಕಾರ, PUSA HYDROGEL ತಂತ್ರಜ್ಞಾನ ಇಳುವರಿಯ ಮೇಲೆ ಬೀರಿದ ಪ್ರಭಾವ ಹೀಗಿದೆ:

ಇದನ್ನು ಬಳಸಿದ ರೈತರ ಪ್ರಕಾರ,  ಇಳುವರಿಯಲ್ಲಿ ಶೇಕಡಾ 10-50 ರಷ್ಟು ಏರಿಕೆಯಾಗಿದ್ದು, ಬೆಳೆಗಳಲ್ಲಿ ನೀರಿನ ಬಳಕೆ 30-50% ಹಾಗೂ ಗೊಬ್ಬರ ಬಳಕೆಯಲ್ಲಿ 22-30% ನಷ್ಟು ಕಡಿಮೆಯಾಗಿದೆ. ಇದರಿಂದ ಅವುಗಳ ಉತ್ಪಾದನಾ ವೆಚ್ಚ ಸಹಕ ಕಡಿಮೆಯಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇದನ್ನು, ಬಿತ್ತುವ ಸಮಯದಲ್ಲಿ ಸಾಲಿನಲ್ಲಿ ಬೀಜದ ಜೊತೆಗೆ, ಹಾಗೂ ನರ್ಸರಿಗಳಲ್ಲಿ ಸಸಿಗಳಿಗೆ ಬೇರು ಉಣಿಸುವಿಕೆಗೆ ಸಹ ಬಳಸಬಹುದು. ಹೊಲಗಳಲ್ಲಿ ಇದನ್ನು ಪ್ರತಿ ಎಕರೆಗೆ 1-1.5 ಕೆಜಿ ಬಳಸಬೇಕು, ಮತ್ತು ನರ್ಸರಿಗಳಲ್ಲಿ ಇದನ್ನು ಪ್ರತಿಸ್ಕ್ವೆರ್ ಮೀಟರ್ ಗೆ 2ಗ್ರಾಂ ನಂತೆ ಬಳಸಬಹುದು ಅದೇ ರೀತಿ, ಸಹಜ ಕೃಷಿಯಲ್ಲಿ ಇಳುವರಿ ಹೆಚ್ಚಳಕ್ಕೆ ಮಿಶ್ರ ಬೆಳೆ ಪದ್ಧತಿ ಅನುಸರಿಸುವುದು ಉತ್ತಮ. ಈ ಪದ್ಧತಿಯ ಅನುಸರಣೆಯಿಂದ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಪರಿಸ್ಥಿತಿಗಳಲ್ಲಿ ಮಾರುಕಟ್ಟೆಯ ಬೆಲೆಗಳಲ್ಲಾಗುವ ಏರುಪೇರು ಅಥವಾ ಇನ್ನಾವುದೋ ಕಾರಣಗಳಿಂದ ಒಂದು ಬೆಳೆ ಹಾಳಾದರೂ ಇನ್ನೊಂದು ಬೆಳೆಯಿಂದ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.  ಅದೇ ರೀತಿ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿರುವ ಅಣುಜೀವಿಗಳು ನಾಶವಾಗಿ ಮಣ್ಣಿನ ಆರೋಗ್ಯ ಹಾಳಾಗಿ ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಪ್ರತಿ ವರ್ಷವು ತಪ್ಪದೇ ರಾಸಾಯನಿಕ ಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವುದು ಅವಶ್ಯ.  ಸಾವಯವ ಗೊಬ್ಬರಗಳಾದ ಕಾಂಪೋಸ್ಟ್, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರಗಳ ಬಳಕೆ ಮಣ್ಣಿನ ಆರೋಗ್ಯಕ್ಕೆ ಸೂಕ್ತ.  ಇನ್ನು, ಆಯಾ ಬೆಳೆಗೆ ಶಿಫಾರಸ್ಸು ಮಾಡಿದ ರಾಸಾಯನಿಕಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಬೀಜದಿಂದ ಹರಡುವ ರೋಗಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆ ಮೊಳಕೆಯೊಡೆಯುವ ಹಂತದಲ್ಲಿಯೇ ಹತೋಟಿ ಮಾಡಬಹುದು. ಈ ಮೂಲಕ ಮುಂದೆ ಆಗಬಹುದಾದ ಇಳುವರಿ ನಷ್ಟವನ್ನು ತಪ್ಪಿಸಬಹುದು. 

ಅದೇ ರೀತಿ, ಮಳೆಯ ಅನಿಶ್ಚಿತತೆಯ ಪರಿಣಾಮದಿಂದ ತಪ್ಪಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ಬದಲಿ ಬೆಳೆ ಪದ್ಧತಿಗಳಿಗೆ “ಪರ್ಯಾಯ ಬೆಳೆ ಯೋಜನೆ” ಎನ್ನುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಪರಿವರ್ತನೆ ಮಾಡಿಕೊಂಡು ಪರ್ಯಾಯ ಕ್ರಮಗಳಿಂದ ಲಾಭ ಪಡೆಯಬಹುದು.  ಸಾಂಪ್ರ,ದಾಯಿಕ ಬೆಳೆಗಳಿಗಿಂದ ಪರ್ಯಾಯ ಬೆಳೆಗಳು ಭಿನ್ನವಾಗಿರುತ್ತವೆ, ಮಳೆಯ ಆಗಮನ, ನಿರಂತರತೆ ಹಾಗೂ ಪ್ರಮಾಣವನ್ನು ಅವಲಂಬಿಸಿ, ಭೂಗುಣಕ್ಕೆ ತಕ್ಕಂತೆ ವ್ಯವಸಾಯ ಮಾಡಿದಲ್ಲಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. 

ಇದನ್ನುಒದಿ…..ಸಹಜ ಕೃಷಿಯಲ್ಲಿ ಜಾನುವಾರು ಗಳ ಮಹತ್ವ – Importance Of Animals In Oraganic Farming

ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ

Leave a Reply

Your email address will not be published. Required fields are marked *